ಅಡಿಗ ನುಡಿಹಾರ : ಜಿ . ರಾಜಶೇಖರ

ಜಿ . ರಾಜಶೇಖರ ನಮ್ಮ ನಡುವಿನ ಪ್ರಭಾವಶಾಲಿ ಚಿಂತಕರು ಮತ್ತು ಪ್ರಖರ ವಿಮರ್ಶಕರು . ತಮ್ಮ ನುಡಿಯಲ್ಲಿರುವ ನಿಷ್ಠುರತೆಯನ್ನು ನಡೆಯಲ್ಲಿಯೂ ರೂಢಿಸಿಕೊಂಡವರು . ಸಂಘಟನೆಯೊಳಗಿದ್ದೇ ಸೊವಿಯತ್ ರಷ್ಯಾದಲ್ಲಿ ಕಮ್ಯುನಿಷ್ಟರಿಂದಾದ ನರಮೇಧವನ್ನು ಅತ್ಯುಗ್ರ ಮಾತುಗಳಲ್ಲಿ ಖಂಡಿಸಿದವರು . ಅಡಿಗರ ಕಾವ್ಯದ ಪ್ರತಿಗಾಮಿತನವನ್ನು ತಿರಸ್ಕರಿಸುತ್ತಲೇ ಅದರ ಹೊರತಾದ ಕಾವ್ಯದ ನಿಜವಾದ ಸತ್ವವನ್ನು ತೋರಿಸಿಕೊಡಬಲ್ಲರು .

ಅವರ ಬಗ್ಗೆ ಲಂಕೇಶ್ ಹೀಗೆ ಹೇಳುತ್ತಾರೆ “ನಮ್ಮ ರಾಜಶೇಖರ ಎಷ್ಟು ಒಳ್ಳೆಯ ವಿಚಾರವಂತ . ನಿಷ್ಟುರತೆ ಮತ್ತು ಬದುಕಿನ ಬಗ್ಗೆ ಪ್ರೀತಿಯನ್ನು ಇಟ್ಟುಕೊಂಡ ಅವರು ಶ್ರೇಷ್ಠ ಚಿಂತನಕಾರ ಎನ್ನುವುದು ನನಗೆ ಹೆಮ್ಮೆಯನ್ನುಂಟು ಮಾಡಿದೆ . ”
ಇವರ ಬಿಡಿ ಲೇಖನಗಳ ಸಂಗ್ರಹ ವನ್ನು ‘ಬಹುವಚನ ಭಾರತ’ ಎಂಬ ಹೆಸರಿನ ಪುಸ್ತಕ ರೂಪದಲ್ಲಿ ಅಭಿನವ ಪ್ರಕಾಶನ ಹೊರತಂದಿದೆ .

ತಮ್ಮ ಅಪಾರ ಓದಿನಿಂದ ದಕ್ಕಿದ ಜ್ಞಾನವನ್ನು ಸೋಸಿ ಎಳೆಯರಿಂದ ಹಿಡಿದು ಎಲ್ಲ ವಯೋಮಾನದವರನ್ನೂ ದಾಟಿಸುವ ಓಘದಲ್ಲಿ ಮಾತಾಡುವ ಹಿರಿಯರಾದ ಕವಿ ಹೃದಯದ ಸಮಾಜವಾದಿ ಜಿ. ರಾಜಶೇಖರರ ಮಾತು ನಮ್ಮ ಬದುಕನ್ನು ಮತ್ತು ಸುತ್ತಣ ಸಮಾಜವನ್ನು ಸ್ವಸ್ಥವಾಗಿಟ್ಟುಕೊಳ್ಳಲು ಅತ್ಯಂತ ಅವಶ್ಯಕ .

Leave a Reply