ಸಂಚಯ ಸಾಹಿತ್ಯ ಪತ್ರಿಕೆಗಾಗಿ ನಡೆಸಿದ ಸಂದರ್ಶನ

“ಸಾಹಿತ್ಯದಲ್ಲಿ ಮುಖ್ಯವಾದದ್ದು , ಶ್ರೇಷ್ಠವಾದದ್ದು ಏನೆಂದರೆ ಅದನ್ನು ಓದಿದ ತಕ್ಷಣ ಇಂತವನೇ ಬರೆದದ್ದು ಎಂದು ಅನ್ನಿಸಬೇಕು. ಬರೆದವನ ವ್ಯಕ್ತಿತ್ವ ಅಲ್ಲಿ ಗೋಚರಿಸಬೇಕು . ಎರಡನೆಯದಾಗಿ ಆತ ತನ್ನ ಮನಸ್ಸಿನಲ್ಲಿ ಇರೋದನ್ನೇ ಹೇಳ್ತಿದ್ದಾನೆ ಅನ್ನಿಸಬೇಕು. ಮಹಾದೇವ ಬರಿಯೋದು ಯಾಕೆ ಚೆನ್ನಾಗಿದೆ ಯಾಕಂದ್ರೆ ಅವನು ನಿಜವಾಗಿ ಮನಸ್ಸಿನಲ್ಲಿರೋದನ್ನ ಬರಿತಾನೆ. ಭಾವನೆಯಲ್ಲಿ ತನ್ನಲ್ಲಿರುವ ವ್ಯಕ್ತಿತ್ವವನ್ನು ತೋರಿಸುತ್ತಾನೆ. ತನಗೆ ಪ್ರಿಯವಾದುದ್ದನ್ನ ಸಾಮಾಜಿಕವಾಗಿವ ಸರಿಯೆನಿಸಿದ್ದನ್ನ ಹೇಳುತ್ತಾನೆ.”

ಅಡಿಗರು ನಿಧನರಾಗುವುದಕ್ಕಿಂತ 3-4 ತಿಂಗಳುಗಳಿಗೆ ಮುಂಚೆ ಡಿ.ವಿ. ಪ್ರಹ್ಲಾದ್ ಮತ್ತು ಅಭಿನವದ ನಾ.ರವಿಕುಮಾರ್ ಸಂಚಯ ಸಾಹಿತ್ಯ ಪತ್ರಿಕೆಗಾಗಿ ನಡೆಸಿದ ಸಂದರ್ಶನ ಇಲ್ಲಿದೆ.

ಸಂದರ್ಶನವಾದ ಬಳಿಕ ಅಡಿಗರು ತನ್ನದೊಂದು ಕಪ್ಪು ಬಿಳುಪು ಛಾಯಾಚಿತ್ರ ತೆಗೆದು ಕೊಡುವಂತೆ ಮನವಿ ಮಾಡಿದ್ದಕ್ಕೆ ತನ್ನದೊಂದು ಹಳೆಯ ಕ್ಯಾಮರಾ ತೆಗೆದುಕೊಂಡು ಹೋಗಿ ಫೋಟೋ ತೆಗೆದಿದ್ದೆ , ಯಾವ ಕೋನದಿಂದ ಕ್ಲಿಕ್ಕಿಸಿದರೂ ಅಡಿಗರು ಅಡಿಗರು ಒಂದೇ ರೀತಿಯ ಪೋಸ್ ಕೊಡುತಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ ಪ್ರಹ್ಲಾದ್.

ಕ್ಯಾಸೆಟ್ಟಿನಿಂದ ಈ ಸಂದರ್ಶನವನ್ನು ಪರಿವರ್ತಿಸಿಕೊಟ್ಟ ಗೌರೀಶ್ ಕಪನಿಗೆ ಧನ್ಯವಾದಗಳು .

Leave a Reply