ಅಡಿಗ ನುಡಿಹಾರ : ಬಿ.ಸಿ.ರಾಮಚಂದ್ರ ಶರ್ಮ

ನವ್ಯದ ಪ್ರಮುಖ ಕವಿಗಳಲ್ಲೊಬ್ಬರಾದ ಬಿ.ಸಿ. ರಾಮಚಂದ್ರ ಶರ್ಮ ಮಂಡ್ಯಜಿಲ್ಲೆ ನಾಗಮಂಗಲದ ಬಳಿಯ ಬೋಗಾದಿಯವರು . ಸುಮಾರು 24 ವರ್ಷಗಳ ವರೆಗೆ ಇಥಿಯೋಪಿಯಾ, ಇಂಗ್ಲೆಂಡ್ , ಜ್ಯಾಂಬಿಯಾ ಹಾಗೂ ಮಲಾವಿಗಳಲ್ಲಿ ಅಧ್ಯಾಪಕರಾಗಿ ಮೊದಲು ಅದಾದ ಮೇಲೆ ಮನ:ಶಾಸ್ತ್ರಜ್ಞರಾಗಿ ಕೆಲಸ ಮಾಡಿದ ಇವರು 1982ರ ಕೊನೆಗೆ ಸ್ವದೇಶಕ್ಕೆ ಹಿಂದುರಿಗಿ ಬೆಂಗಳೂರಿನಲ್ಲಿ ನೆಲೆಸಿದರು. ಸುಮಾರು ಆರು ದಶಕಗಳ ಕಾಲ ಕಾವ್ಯ ರಚನೆಯಲ್ಲಿ ತಮ್ಮನ್ನು ಇಡಿಯಾಗಿ ತೊಡಗಿಸಿಕೊಂಡ ಶರ್ಮ ಕನ್ನಡ ಭಾಷೆಯೊಳಗೆ ಅಪರಿಚಿತವಾದ ಹೊಸ ಲೋಕಗಳನ್ನು ತರಲು ಶರ್ಮ ಪ್ರಯತ್ನಿಸಿದ್ದು ಮಾತ್ರವಲ್ಲದೆ ಹಲವು ಸಮಕಾಲೀನ ಇಂಗ್ಲಿಷ್ ಕವಿಗಳನ್ನು ಕನ್ನಡಕ್ಕೆ ಭಾಷಾಂತರಿಸಿದರು. ಹಲವು ಒಳ್ಳೆಯ ಸಣ್ಣ ಕಥೆಗಳನ್ನು ಬರೆದರು. ಕನ್ನಡದ ಹಲವು ಮುಖ್ಯ ಕೃತಿಗಳನ್ನು ಅವರ ಸಂಗಾತಿ ಪದ್ಮಾರ ಜೊತೆ ಇಂಗ್ಲಿಷಿನಲ್ಲಿ ಭಾಷಾಂತರಿಸಿ ಪ್ರಕಟಿಸಿದರು. ಪದ್ಮ-ಶರ್ಮ ಜತೆಗೂಡಿ ಪೆಂಗ್ವಿನ್ ಪ್ರಕಾಶನಕ್ಕಾಗಿ ಮಾಸ್ತಿಯವರ ‘ಚಿಕ್ಕವೀರರಾಜೇಂದ್ರ’ ಕಾದಂಬರಿಯನ್ನು, ಯಶವಂತ ಚಿತ್ತಾಲರ ಕತೆಗಳನ್ನು ಮತ್ತು ಕುವೆಂಪು ಅವರ ‘ಕಾನೂರು ಹೆಗ್ಗಡತಿ’ ಕೃತಿಗಳನ್ನು ಇಂಗ್ಲೀಷಿಗೆ ಭಾಷಾಂತರಿಸಿದರು.


Leave a Reply