ಅಡಿಗ ನುಡಿಹಾರ : ವೈದೇಹಿ

 

ಉಡುಪಿ ಜಿಲ್ಲೆಯ ಕುಂದಾಪುರದವರಾದ ವೈದೇಹಿಯವರ ನಿಜ ನಾಮ ಜಾನಕಿ .

‘ನೀರೆಯರ ಮನ’ ಎಂಬ ಕತೆಯನ್ನು ಸುಧಾ ವಾರಪತ್ರಿಕೆಗೆ “ಜಾನಕಿ” ಎಂಬ ಕಾವ್ಯನಾಮದಲ್ಲಿ ಪ್ರಕಟಣೆಗೆ ಕಳುಹಿಸಿದರು. ಆನಂತರ ಅದು ನಿಜ ಘಟನೆಯಾದ್ದರಿಂದ ಪ್ರಕಟಿಸಬೇಡಿ ಎಂದು ಪತ್ರವನ್ನೂ ಬರೆದರು. ಆದರೆ ಸುಧಾದ ಆಗಿನ ಸಂಪಾದಕರು ವೈದೇಹಿ ಎಂಬ ಕಾವ್ಯನಾಮ ನೀಡಿ ಈ ಕಥೆಯನ್ನು ಪ್ರಕಟಿಸಿದರು. ಅಂದಿನಿಂದ ಇವರಿಗೆ ವೈದೇಹಿ ಎಂಬುದೇ ಕಾವ್ಯನಾಮವಾಯಿತು.

ಕೌಟುಂಬಿಕ ಜಗತ್ತಿನ ನಾಲ್ಕು ಗೋಡೆಗಳ ಒಳಗೇ ಬಹುಪಾಲು ಹೆಂಗಸರೊಂದಿಗೆ ನಿಕಟವಾಗಿ ಬದುಕುವುದನ್ನು ಆಯ್ದುಕೊಂಡ ವೈದೇಹಿ, ಸ್ತ್ರೀ ಲೋಕದ ಅನುಭವದ ಮೂಲಕವೆ ಬದುಕಿನ ಅರ್ಥಗಳನ್ನು ಜಾಲಿಸಲು ಹೊರಟವರು. ಅದನ್ನೇ ಬರಹರೂಪಕ್ಕೆ ತಂದ ಪ್ರಮುಖರು .

ಕ್ರೌಂಚ ಪಕ್ಷಿಗಳು ಎಂಬ ಕಥಾಸಂಕಲನಕ್ಕೆ ೨೦೦೯ರಲ್ಲಿ ಸಾಹಿತ್ಯ ಅಕಾಡೆಮಿ ಪುರಸ್ಕಾರ ದೊರೆತಿದೆ.

Leave a Reply