ಪ್ರಾರ್ಥನೆ

ಪ್ರಭೂ, ಪರಾಕುಪಂಪನ್ನೊತ್ತಿಯೊತ್ತಿ ನಡ ಬಗ್ಗಿರುವ ಬೊಗಳುಸನ್ನಿಯ ಹೊಗಳುಭಟ್ಟ ಖಂಡಿತ ಅಲ್ಲ; ಬಾಲವಾಡಿಸಿ ಹೊಸೆದು ಹೊಟ್ಟಿ ಡೊಗ್ಗುಸಲಾಮು ಬಗ್ಗಿ ಮಿಡುಕುವ ಸಂಧಿವಾತ ಪೀಡಿತನಲ್ಲ; ತನ್ನ ಮೋಂಬತ್ತಿ ನಂದಿಸಿ ಸಂದಿಬೆಳಕಲ್ಲಿ ಜುಮ್ಮನರಸುವ ಷಂಡ ಜಿಗಣೆಯಲ್ಲ; ಕಾಲಪುಷ್ಟರ ಪೃಷ್ಠಕೊಡ್ಡಿ ಬೆನ್ನ, .... ಪೂರ್ತಿ ಓದಿ

ಕೂಪ ಮಂಡೂಕ

೧ ನೀನೆಲ್ಲಿ ಈಗ; ಹೆಗಲಿಗೆ ಹೆಗಲ ಕೊಟ್ಟವನು ಹಾಯಿಯನ್ನುರುಟುರುಟು ಊದಿದವನು, ದಾರಿಯುದ್ದಕ್ಕು ರಹದಾರಿ ಗಿಟ್ಟಿಸಿ ದಿಳ್ಳಿ ದ್ವೀಪಾಂತರಕ್ಕೆ ಕೈಕೊಟ್ಟ ಸಖನು? ನಟ್ಟ ನಡುದಾರಿ ತೇಗುವ ತೋಟದೊಳಗಡೆಗೆ ಮೂಗುಮಟ ಕುಡಿದ ತಂಗೊಳದ ತಡಿಗೆ ಟಾಂಗುಕೊಟ್ಟು ಕಮಂಗಿ ಕಣ್ಣುಬಿಡುವಷ್ಟಕ್ಕೆ ಕಂಬಿಕಿತ್ತೆ ವಿಶಾಲ .... ಪೂರ್ತಿ ಓದಿ

ಶ್ರೀ ರಾಮನವಮಿಯ ದಿವಸ

ಶ್ರೀರಾಮನವಮಿಯ ದಿವಸ ರಾಮನಾಮಾಮೃತವೆ ಪಾನಕ, ಪನಿವಾರ, ಕೋಸಂಬರಿ; ಕರಬೂಜ ಸಿದ್ದೋಟುಗಳ ಹೋಳು, ಸೀಕರಣೆ; ವ್ಯಕ್ತ ಮಧ್ಯಕ್ಕೆ ಬಂದುರಿವ ಶಬರಿ. ಕಾದು ಗಾರಾದ ಮಣ್ಣೊಡಲಿನೊಳಗಡೆಗೆ ಕಿಡಿ – ಕುಳಿತ ಮೂಲಾಧಾರ ಜೀವಧಾತು ಮೋಡದ ಸಹಸ್ರಾರದೆಡೆಗೆ ತುಡಿಯುವ ತುರುಸು: ಮಣ್ಣೊಡೆದ ಹಸರು ಹೂ ಹುಲ್ಲು .... ಪೂರ್ತಿ ಓದಿ