ಹೆಜ್ಜೆಗುರುತು

೧೮-೦೨-೧೯೧೮ ಮೊಗೇರಿ ಗೋಪಾಲಕೃಷ್ಣ ಅಡಿಗರು ಹುಟ್ಟಿದ ದಿನ. ಈಗಿನ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೋಗೇರಿ ಎಂಬ ಹಳ್ಳಿಯಲ್ಲಿ.
೧೯೩೧ ಅಡಿಗರು ಪದ್ಯ ಬರೆಯಲು ಆರಂಭಿಸಿದ ವರ್ಷ. ಅವರಿಗಾಗ ೧೩ರ ವಯಸ್ಸು.
೧೯೪೨ ಬಿ.ಎ. (ಇಂಗ್ಲಿಷ್) ಮೈಸೂರು ವಿಶ್ವವಿದ್ಯಾಲಯ
೦೮-೧೨-೧೯೪೪ ಅಡಿಗರು ಲಲಿತೆಯವರನ್ನು ಮದುವೆಯಾದ ದಿನ
೧೯೪೬ ಅಡಿಗರ ಮೊದಲ ಕವನ ಸಂಕಲನ ಭಾವತರಂಗ ಪ್ರಕಟವಾಯಿತು.
೧೯೪೮ ಎರಡನೆ ಕವನ ಸಂಕಲನ ಕಟ್ಟುವೆವು ನಾವು ಪ್ರಕಟವಾಯಿತು.
೧೯೪೮-೫೦ ಶಾರದಾವಿಲಾಸ್ ಕಾಲೇಜ್, ಮೈಸೂರು
೧೯೫೦ ಮೊದಲ ಮಗು ವಿದ್ಯಾಳ ಜನನ
೧೯೫೨ ಎಂ.ಎ. (ಇಂಗ್ಲಿಷ್) ನಾಗಪುರ ವಿಶ್ವವಿದ್ಯಾಲಯ. ನಡೆದು ಬಂದ ದಾರಿ ಕವನ ಸಂಕಲನ ಪ್ರಕಟಣೆ.
೧೯೫೧-೫೪ ಕುಮಟಾ ಕೆನರಾ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕ.೧೯೫೪ ರಲ್ಲೇ ಚಂಡೆ ಮದ್ದಳೆ ಪ್ರಕಟಣೆ.
೧೯೫೪-೬೪ ಸೆಂಟ್ ಫಿಲೋಮಿನಾ ಕಾಲೇಜ್ ಮೈಸೂರು (ಇಂಗ್ಲಿಷ್ ರೀಡರ್). ಈ ಅವಧಿಯಲ್ಲೇ ಭೂಮಿಗೀತ(೧೯೫೯) ಪ್ರಕಟಣೆ.
೧೯೬೨ ಸಾಕ್ಷಿ ಆರಂಭ
೧೯೬೫-೬೮ ಸಾಗರದ ಲಾಲ್ ಬಹದ್ದೂರ್ ಕಾಲೇಜಿನಲ್ಲಿ ಪ್ರಿನ್ಸಿಪಾಲರಾಗಿ ಕಾರ್ಯ ನಿರ್ವಹಣೆ.
೧೯೬೮-೭೧ ಪೂರ್ಣಪ್ರಜ್ಞ ಕಾಲೇಜ್, ಉಡುಪಿ (ಪ್ರೊಫೆಸರ್ ಮತ್ತು ಪ್ರಿನ್ಸಿಪಾಲ್)
೧೯೭೧ ಜನಸಂಘದ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತದ್ದು
೧೯೭೨-೭೫ ನ್ಯಾಷನಲ್ ಬುಕ್ ಟ್ರಸ್ಟ್, ದೆಹಲಿ (ಡೆಪ್ಯುಟಿ ಡೈರೆಕ್ಟರ್-ಸಂಪಾದಕೀಯ), ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್, ಸಿಮ್ಲಾ
ವಿಸಿಟಿಂಗ್ ಫೆಲೊ
೧೯೭೨ ಭೂಮಿಗೀತ ಪ್ರಕಟಣೆಯ ಹದಿಮೂರು ವರುಷಗಳ ನಂತರ ವರ್ಧಮಾನ ಪ್ರಕಟಣೆ, ಇದೇ ವರುಷ
೧೯೭೪ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.
೧೯೭೫ ವರ್ಧಮಾನ ಕವನಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
೧೯೭೬ ಕೇರಳದ ಪ್ರತಿಷ್ಟಿತ ‘ಕುಮಾರ್ ಸಮ್ಮಾನ್’ ಪ್ರಶಸ್ತಿ
೧೯೭೯ ಧರ್ಮಸ್ಥಳದಲ್ಲಿ ನಡೆದ ೫೧ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ.
೧೯೮೦ ಬೆಂಗಳೂರಿನಲ್ಲಿ ಸ್ವಂತ ಮನೆ ಕಟ್ಟಿಸಿದ್ದು, ಮೂಲಕ ಮಹಾಶಯರು(೧೯೮೦) ಪ್ರಕಟಣೆ
೧೯೮೨-೮೩ ವಿಶ್ವಕವಿ ಸಮ್ಮೇಳನದಲ್ಲಿ ಭಾಗವಹಿಸಲು ಪ್ಯಾರಿಸ್, ಯುಗೋಸ್ಲೋವಿಯಾಗಳಿಗೆ ಭೇಟಿ. ಬತ್ತಲಾರದ ಗಂಗೆ(೧೯೮೩) ಪ್ರಕಟಣೆ
೧೯೮೫ ಜನಸಂಘದ ಅಭ್ಯರ್ಥಿಯಾಗಿ ವಿಧಾನಸಭೆಗೆ ಸ್ಪರ್ಧೆ (ಸೋಲು)
೧೯೮೬ ಮಧ್ಯ ಪ್ರದೇಶ ಆರಂಭಿಸಿದ ಕಬೀರ್ ಸಮ್ಮಾನ್ ಪ್ರಶಸ್ತಿ. ಖಾಯಿಲೆ (ಪಾರ್ಶ್ವವಾಯು), ಭಾಗಶಃ ಚೇತರಿಕೆ
೧೯೮೭ ಚಿಂತಾಮಣಿಯಲ್ಲಿ ಕಂಡ ಮುಖ(೧೯೮೭)
೧೯೮೮ ಥ್ಯಾಲಂಡಿನ ಬ್ಯಾಂಕಾಕ್ ನಗರದಲ್ಲಿ ನಡೆದ ಜಾಗತಿಕಕವಿ ಸಮ್ಮೇಳನದಲ್ಲಿ ವರ್ಲ್ಡ್ ಅಕಾಡೆಮಿ ಆಫ್ ಆರ್ಟ್ ಎಂಡ್ ಕಲ್ಚರ್’ ಸಂಸ್ಥೆ ಅವರಿಗೆ ಡೊಕ್ಟರ್ ಆಫ್ ಲಿಟರೇಚರ್’ ಪ್ರಶಸ್ತಿ ನೀಡಿತು
೧೯೯೦ ಸುವರ್ಣ ಪುತ್ಥಳಿ(೧೯೯೦)
೧೯೯೨ ಬಾ ಇತ್ತ ಇತ್ತಕವನ ಸಂಕಲನ
೦೪-೧೧-೧೯೯೨ ಮೋಗೇರಿ ಗೋಪಾಲಕೃಷ್ಣ ಅಡಿಗ ನವೆಂಬರ್ ೪ , ೧೯೯೨ ರಂದು ಇಹಲೋಕ ತ್ಯಜಿಸಿದರು.