ಕೂಪ ಮಂಡೂಕಪದ್ಯ : ಕೂಪ ಮಂಡೂಕ
ಕವನ ಸಂಕಲನ : ವರ್ಧಮಾನ
ಓದು : ಗುರುರಾಜ ಮಾರ್ಪಳ್ಳಿ

ಶ್ರೀಯುತ ಗುರುರಾಜ ಮಾರ್ಪಳ್ಳಿಯವರದ್ದು ಬಹುಮುಖ ವ್ಯಕ್ತಿತ್ವ . ಸಾಂಸ್ಕೃತಿಕ ಚಿಂತಕ , ಕವಿ, ಕತೆಗಾರ , ಚಿತ್ರ-ಶಿಲ್ಪ ಕಲಾವಿದ, ಯಕ್ಷಗಾನ ಕಲಾವಿದ, ಸಂಗೀತಗಾರ, ಕೊಳಲುವಾದಕ, ನಾಟಕಕಾರ ಹೀಗೆ .ಮಾರ್ಪಳ್ಳಿಯವರಲ್ಲಿ ಹಲವರಿದ್ದಾರೆ .

ಸಾಂಸ್ಕೃತಿಕ ಸಮೃದ್ಧಿಗಾಗಿ ಜೀವನದ ವೈವಿಧ್ಯಮಯ ಮಾಧ್ಯಮಗಳನ್ನು ದುಡಿಸಿಕೊಳ್ಳುವ ಹವ್ಯಾಸ, ಆ ಮೂಲಕ ಸಾಹಿತ್ಯ, ಸಂಗೀತ, ಕಲೆಯ ಕ್ಷೇತ್ರಗಳಲ್ಲಿ ನಿರಂತರ ಪ್ರಯೋಗಶೀಲ.
ಬಂಡೆ ಮತ್ತು ಮನುಷ್ಯ,Mr ಸಾಂತಾಯಣ Nಇತರ ಕಥೆಗಳು (ಕಥಾ ಸಂಕಲನ), ಅತಂತ್ರ, ತಲ್ಲಣ, ಕಾಲಯಾನ (ಕಾದಂಬರಿಗಳು), ಗುರುರಾಜ ಮಾರ್ಪಳ್ಳಿ ಖ್ಯಾಲು ಖಯಾಲಿಗಳು (ಕವನ ಸಂಕಲನ), ಸುಧಾ, ತರಂಗ, ಉದಯವಾಣಿ ಮುಂತಾದ ಪತ್ರಿಕೆಗಳಲ್ಲಿ ಬಿಡಿ ಲೇಖನಗಳು .
1996 ರಿಂದ “ನಿನಾದ” ಭಾವ ಗಾನ ತಂಡ ನಿರ್ಮಾಣ. ರಾಜ್ಯಾದ್ಯಂತ ಕಾರ್ಯಕ್ರಮ, ಭಾವಗೀತೆಗಳಿಗೆ ಹೊಸ ಆಯಾಮ. ಬೇಂದ್ರೆ, ಕುವೆಂಪು, ಪುತಿನ, ಕೆಎಸ್ ನ, ಅಡಿಗ, ಎಕ್ಕುಂಡಿ ಕಾವ್ಯಗಳಿಗೆ ಹೊಸ ಧ್ವನಿ. ವಚನಗಳಿಗೆ ಹೊಸ ರೀತಿಯ ಸಂಯೋಜನೆ.
1986 ರಿಂದ ಕೆ. ವಿ. ಸುಬ್ಬಣ್ಣ ಅವರ ನೀನಾಸಂ ನಾಟಕ ತರಬೇತಿ ಕೇಂದ್ರದ ಅಧ್ಯಾಪಕ ಮತ್ತು ರಂಗ ನಿರ್ದೇಶಕ .ನಾಟಕ ರಂಗಭೂಮಿಯಲ್ಲಿ ಸಂಗೀತ ನಿರ್ದೇಶನ.ಮಹಾಕಾಲ, ಅಂತರಾಳ, ಅಣ್ಣಾವಾಲಿ, ಬಿಡುಗಡೆ, ಮೊದಲಾದ ಸ್ವಂತ ನಾಟಕಗಳ ರಚನೆ. “ಪಂಚರಂಗಿ” ನಾಟಕ ಸಂಕಲನ.
ಡಾ| ಶಿವರಾಮ ಕಾರಂತರ ಯಕ್ಷಗಾನ ಕೇಂದ್ರದಲ್ಲಿ ಡಿಪ್ಲೋಮ (1972). ಡಾ| ಶಿವರಾಮ ಕಾರಂತರ ಯಕ್ಷರಂಗದಲ್ಲಿ ಕಲಾವಿದ. ಇಡಗುಂಜಿ ಮೇಳದಲ್ಲಿ ಕಲಾವಿದ. ಹಿಂದೂಸ್ತಾನಿ ಸಂಗೀತ, ಬಾನ್ಸುರಿ ,ಯಕ್ಷಗಾನ ಭಾಗವತಿಕೆ ಕಲಿಕೆ ಮತ್ತು ಅಧ್ಯಯನ. ಬಾನ್ಸುರಿಯಲ್ಲಿ ಯಕ್ಷಗಾನ ಭಾಗವತಿಕೆ ಹೀಗೆ ಯಕ್ಷಗಾನ ಭಾಗವತಿಕೆಯಲ್ಲಿ ಸಂಶೋಧನೆ.


Leave a Reply